ಮಂಗಳೂರು : ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಇಂದು ವಿದ್ಯಾಭಾರತಿ ಕರ್ನಾಟಕ ದ. ಕ. ಜಿಲ್ಲೆಯ ವತಿಯಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿತು. ಜಿಲ್ಲೆಯ 47 ಕಬಡ್ಡಿ ತಂಡಗಳು ವಿವಿಧ ವಿಭಾಗಗಳಲ್ಲಿ ಪ್ರತಿನಿಧಿಸಿರುತ್ತದೆ. ಈ ಪಂದ್ಯಾಟವನ್ನು ವಿದ್ಯಾಭಾರತಿ ಕರ್ನಾಟಕದ ರಾಜ್ಯ ಕಾರ್ಯದರ್ಶಿ ವಸಂತ ಮಾಧವ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾ ಭಾರತಿ ಶಾರೀರಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಧೃಢವಾಗಬೇಕೆಂಬ ಉದ್ದೇಶದೊಂದಿಗೆ ಈ ತರದ ಕ್ರೀಡಾ ಕೂಟವನ್ನು ಆಯೋಜಿಸಿಕೊಂಡು ಬರುತ್ತಿದೆ. ಜಿಲ್ಲಾ ಮಟ್ಟದಲ್ಲಿ ಅಯ್ಕೆಯಾದವರು ರಾಜ್ಯಮಟ್ಟಕ್ಕೆ ನಂತರ ಕ್ಷೇತ್ರಿಯಮಟ್ಟಕ್ಕೆ ಹಾಗೂ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ರಾಷ್ಟ್ರಮಟ್ಟದಿಂದ ನೇರವಾಗಿ SGFI ಗೆ ಪ್ರವೇಶವನ್ನು ಪಡೆಯುತ್ತಾರೆ. ಇದು ವಿದ್ಯಾರ್ಥಿಗಳಿಗಿರುವ ಅವಕಾಶ ಇದನ್ನು ಕಠಿಣ ಪರಿಶ್ರಮದಿಂದ ಸಫಲಗೊಳಿಸಬೇಕೆಂದು ಕರೆ ನೀಡಿದರು. ಶಿಸ್ತು ಮತ್ತು ಸಂಸ್ಕಾರದ ಭಾಗವಾಗಿ ಕ್ರೀಡಾ ಕೂಟಗಳಿರುತ್ತದೆ. ಇದನ್ನು ಪ್ರತಿಯೊಬ್ಬರೂ ತನ್ನ ಜೀವನದಲ್ಲಿ ಅಳವಡಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪ್ರೋ ಕಬಡ್ಡಿ ಬೆಂಗಾಳ್ ವಾರಿಯರ್ಸ್‌ನ ಆಟಗಾರ ಮಿಥುನ್ ಗೌಡ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತಾಧಿಕಾರಿ ಡಾ.ಕೆ.ಸಿ. ನಾೖಕ್ ವಹಿಸಿ ಮಾತನಾಡಿ ನಮಗೆ ಸೋಲು ಗೆಲುವು ಇದ್ದೆ ಇರುತ್ತದೆ. ಆದರೆ ಅಂತಹ ಸ್ಪರ್ದೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು. ವಿದ್ಯಾ ಭಾರತಿ ಶಿಕ್ಷಣದ ಜೊತೆ ಶಾರೀರಿಕ ಶಿಕ್ಷಣವನ್ನು ಜೋಡಿಸಿರುವುದು ಅಭಿನಂದನೀಯ ಕಾರ್ಯ ಎಂದು ಹರ್ಷ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾಭಾರತಿ ದ.ಕ. ಜಿಲ್ಲೆಯ ಕ್ರೀಡಾ ಸಂಯೋಜಕ ಕರುಣಾಕರ ಹಾಗೂ ಶಕ್ತಿ ಪಪೂಕಾಲೇಜು ಪ್ರಾಂಶುಪಾಲೆ ದಿವ್ಯಾಜ್ಯೋತಿ ಉಪಸ್ಥಿತರಿದ್ದರು. ಸ್ವಾಗತವನ್ನು ವಿದ್ಯಾಭಾರತಿ ದ.ಕ.ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ. ಮತ್ತು ವಂದನಾರ್ಪಣೆಯನ್ನು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ನೆರವೇರಿಸಿದರು. ನಿರೂಪಣೆಯನ್ನು ಕನ್ನಡ ಉಪನ್ಯಾಸಕ ಸುನೀಲ್ ನೆರವೇರಿಸಿದರು.