Child sexual abuse is a global phenomenon and a matter of concern for all. Researchers observe that Educational institutions and health professionals play a vital role in the identification and protection of children. Keeping this in mind an awareness program was conducted at Reshma Memorial Auditorium, Shakthi Residential school and PU College, Mangalore.
The awareness sessions for students and staff helped to understand the concepts of good touch, bad touch and sexual abuse.
The chief guest Dr.Sharika Rai, Ass.Professor, SDM law college,Mangaluru in her speech mentioned if victimised, children should be able to inform someone that they were sexually abused. It is also advisable to arrange regular sessions on personal safety that talks about body parts, online safety and protection from abuse. Children must engage in active dialogue with parents to ensure that they are aware of the issues faced by children.
Children spend a significant amount of their childhood in the school and interact with the school staff, especially teachers as much as they do with their parents. Because of this, schools have a hand in the overall development and health of children. Hence, school authorities and staff should commit to giving students an environment that is safe and promotes mental and physical health.
In the Questionnaire session students from grade 8 to 12 actively put forward their doubts and many queries. The speaker clarified that through this Act the case will be done in faster implementation and can provide relief to the Children. Students need not to report publicly, and will be dealt in simple manner. Victim’s identity will be kept confidential. The special courts stipulated under the POCSO Act are also to be child friendly. There are provisions such as making a child-friendly atmosphere in the court premises by allowing a family member, a guardian, a friend or a relative, in whom the child has trust or confidence, to be present and ensuring that the child does not have to face the accused during evidence collection as well as cross examination.
Dr.K.C Naik founder and administrator , Shakthi Education trust presided over the programme. Mr. Ramesh K, Chief advisor, Mr.Venkatesha Murthy Principal Shakthi PU college and Mr.Ravishankar Hegde, Principal Shakthi Residential School were present in the programme. Ms.Apoorva welcomed the gathering and Mr. Deepak Kuduva, vice principal thanked the entire people at the auditorium. Ms. Chaitra compered the programme.
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಎಸ್ಡಿಎಮ್ ಕಾನೂನು ಮಹಾವಿದ್ಯಾಲಯದ ಸಹಯೋಗದೊಂದಿಗೆ ’ಪೋಕ್ಸೊ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ
ಮಂಗಳೂರು ಆ. 16 : ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದನ್ನು ತಡೆಯುವುದಕ್ಕೋಸ್ಕರ ನಮ್ಮ ದೇಶದಲ್ಲಿ 2012 ರಲ್ಲಿ ಜಾರಿಗೆ ಬಂದಿರುವ ಕಾಯ್ದೆ ’ಪೋಕ್ಸೊ ಕಾಯ್ದೆಯಾಗಿದೆ. ಲೈಂಗಿಕ ದೌರ್ಜನ್ಯ ಹಾಗೂ ಇತರ ದೌರ್ಜನ್ಯವನ್ನು ತಡೆಯುವಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ವೃತ್ತಿಪರರು ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಂಗಳೂರಿನ ರೇಶ್ಮಾ ಮೇಮೋರಿಯಲ್ ಆಡಿಟೋರಿಯಂನಲ್ಲಿ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪಿ.ಯು ಕಾಲೇಜಿನಲ್ಲಿ ಎಸ್ಡಿಎಮ್ ಕಾನೂನು ಮಹಾವಿದ್ಯಾಲಯದ ಸಹಯೋಗದೊಂದಿಗೆ ಪೋಕ್ಸೊ ಕಾಯ್ದೆಯ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಜಾಗೃತಿ ಕಾರ್ಯಾಗಾರದಲ್ಲಿ ಉತ್ತಮ ಸ್ಪರ್ಶ, ಕೆಟ್ಟ ಸ್ಪರ್ಶ ಮತ್ತು ಲೈಂಗಿಕ ದೌರ್ಜನ್ಯದ ಪರಿಕಲ್ಪನೆಗಳನ್ನು ಕುರಿತಂತೆ ಸವಿಸ್ತರವಾದ ಮಾಹಿತಿಯನ್ನು ಎಸ್ಡಿಎಂ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸಾರೀಕಾ ರೈ ನೀಡಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಇಂತಹ ದೌರ್ಜನ್ಯದಲ್ಲಿ ತಕ್ಷಣ ಸಂಬಂಧಪಟ್ಟ ಶಾಲೆಯ ಸಮಿತಿಗೆ ಅಥವಾ ಫೋಕ್ಸೊ ತಡೆಯುವ ವಿಭಾಗಕ್ಕೆ ಮಾಹಿತಿ ನೀಡಬೇಕು. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರ ಪೋಷಕರು ಸದಾ ಮಕ್ಕಳ ಜೊತೆ ಸಂವಾದದಲ್ಲಿ ತೋಡಗಬೇಕೆಂದು ಹೇಳಿದರು.
ಮಕ್ಕಳು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳು ಶಾಲಾ ಸಿಬ್ಬಂದಿಗಳೊಂದಿಗೆ, ವಿಶೇಷವಾಗಿ ಶಿಕ್ಷಕರೊಂದಿಗೆ ತಮ್ಮ ಪೋಷಕರೊಂದಿಗೆ ಹೆಚ್ಚಿನ ಸಮಯದಲ್ಲಿ ಒಟ್ಟಿಗೆ ಇರುತ್ತಾರೆ. ಆದ್ದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಹಾಗೂ ಆರೋಗ್ಯದ ವಿಚಾರಗಳು ಶಾಲೆಗಳ ಆದ್ಯತೆ ಆಗಿರುತ್ತದೆ. ಶಾಲೆಯ ಮುಖ್ಯಸ್ಥರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಮಾನಸಿಕ ಮತ್ತು ನೆಮ್ಮದಿಯ ವಾತಾವರಣವನ್ನು ನೀಡಲು ಬದ್ದರಾಗಿರಬೇಕು. ಪ್ರಶ್ನೋತ್ತರ ಅವಧಿಯಲ್ಲಿ ೮ ರಿಂದ ಪಿಯುಸಿ ತರಗತಿಯ ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಮತ್ತು ಅನೇಕ ಪ್ರಶ್ನೆಗಳನ್ನು ಉಪನ್ಯಾಸಕರಲ್ಲಿ ಕೇಳಿದರು. ಸಂತ್ರಸ್ತರು ದೂರು ನೀಡಿದ ನಂತರ ಪ್ರಕರಣವನ್ನು ತ್ವರಿತವಾಗಿ ವಿಚಾರಿಸುವುದು ಮತ್ತು ಮಕ್ಕಳಿಗೆ ಪರಿಹಾರವನ್ನು ನೀಡಲು ವಿಶೇಷ ಪೋಕ್ಸೊ ಕೋರ್ಟ್ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಪೊಕ್ಸೊ ಕಾಯ್ದೆಯಡಿಯಲ್ಲಿ ನಿಗದಿಪಡಿಸಲಾದ ವಿಶೇಷ ನ್ಯಾಯಾಲಯಗಳು ಸಹ ಮಕ್ಕಳ ಸ್ನೇಹಿಯಾಗಿರುತ್ತವೆ. ಮಗುವಿಗೆ ನಂಬಿಕೆ ಅಥವಾ ವಿಶ್ವಾಸವಿರುವ ಕುಟುಂಬದ ಸದಸ್ಯರು, ಪಾಲಕರು ಸ್ನೇಹಿತರು ಅಥವಾ ಸಂಬಂಧಿಕರಿಗೆ ಹಾಜರಾಗುವ ಮೂಲಕ ನ್ಯಾಯಾಲಯದಲ್ಲಿ ಆವರಣದಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಿಸುವುದು ಮುಂತಾದ ಕಾಯ್ದೆಯಲ್ಲಿ ಅನುಕೂಲಗಳಿವೆ.
ಶಕ್ತಿ ಶಿಕ್ಷಣ ಟ್ರಸ್ಟ್ನ ಸಂಸ್ಥಾಪಕ ಹಾಗೂ ಆಡಳಿತಾಧಿಕಾರಿ ಡಾ.ಕೆ.ಸಿ. ನಾೖಕ್ ಕಾರ್ಯಕ್ರಮದ ಅಧಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. , ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ್ ಹೆಗ್ಡೆ ಉಪಸ್ಥಿತರಿದ್ದರು. ಶಿಕ್ಷಕಿ ಅಪೂರ್ವ ಸ್ವಾಗತಿಸಿದರು ಮತ್ತು ಉಪಪ್ರಾಂಶುಪಾಲರಾದ ಶ್ರೀ ದೀಪಕ್ ಕುಡ್ವ ಧನ್ಯವಾದ ಸಲ್ಲಿಸಿದರು. ಚೈತ್ರಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.