ಮಂಗಳೂರು ಆ. 24 : ಇಂದು ಬೆಳಗ್ಗೆ ಮಂಗಳೂರಿನ ಶಕ್ತಿ ವಸತಿ ಸಂಸ್ಥೆಗೆ ಭೇಟಿ ನೀಡಿದ ಸಂಸ್ಕಾರ ಭಾರತೀ ಅಖಿಲಭಾರತೀಯ ಸಂಘಟನಾ ಕಾರ್ಯದರ್ಶಿ ಶ್ರೀ ಅಭಿಜಿತ್ ಗೋಖಲೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ನಿನ್ನೆ ಅಷ್ಟೇ ನಮ್ಮ ಭಾರತದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಯಶಸ್ವಿಯಾಗಿ ವಿಕ್ರಮ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿದೆ. ಇದು ಭಾರತೀಯರ ಜೀವನದಲ್ಲಿ ಮತ್ತು ಭಾರತದ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆಸಿಡಬೇಕಾದ ವಿಷಯವಾಗಿದೆ. ಚಂದ್ರ ಹಾಗೂ ಭೂಮಿಯ ಸಂಬಂಧ ವೈಜ್ಞಾನಿಕ ದೃಷ್ಟಿಯಲ್ಲಿ ಎಷ್ಟು ಮಹತ್ವದ್ದೋ ಸಾಂಪ್ರದಾಯಕವಾಗಿಯೂ ಅಷ್ಟೇ ಮಹತ್ವದ್ದಾಗಿದೆ. ಭಾರತದಲ್ಲಿನ ಕಲೆ, ಸಂಸ್ಕೃತಿ ಹಾಗೂ ಪುರಾತನ ವಿಜ್ಞಾನ ಇಂದಿನ ಯುವ ಸಮುದಾಯಕ್ಕೆ ಸರಿಯಾಗಿ ಪರಿಚಯವಾಗಬೇಕು. ಚಂದ್ರಯಾನ 3 ರ ಯಶಸ್ವಿಗೆ ಕಾರಣರಾದ ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ರಾಜ್ಯ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಉಪಸ್ಥಿತರಿದ್ದರು. ಶಕ್ತಿ ವಸತಿ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ನಿರೂಪಿಸಿದರು.