Addressing the children, former Vidhan Parishad member Arun Shahpura stated that sports relieve both physical and mental stress during the National Sports Day celebrations held on the occasion of Major Dhyan Chand’s birthday at Shakthi Institution, Shakthinagar, today. So, everyone loves sports. Nowadays, everyone wants their children to become doctors or engineers. However, the number of parents who aspire for their children to become good sportspeople is fewer. For an educational institution to be perfect, it should also excel in sports, he mentioned.
Dr. Haridasa Kooluru, Assistant Director of the Department of Physical Education at Mangalore University, who participated in the program as another guest, said that Major Dhyan Chand brought India its first gold medal through his sports achievements, even though he wasn’t involved in sports since childhood. However, nothing is impossible if students start their sports journey from a young age. A word from parents made Milkha Singh the best athlete in the world. There is no age limit for sports, and no obstacles can hinder sports achievements. He emphasized that with firm determination in our minds, constant hard work, and concentration, we can achieve anything.
The program was presided over by Sanjit Nayak, secretary of Shakthi Education Trust. Ramesh K, Chief Adviser of the Trust, Venkatesa Murthy H, Principal of Shakthi PU College, and Ravi Shankar Hegde, Principal of Shakthi Residential School, were present. The guests were introduced by Sociology teacher Akshita and the program was compered by Kannada teacher Sharanappa.
ಕ್ರೀಡೆ -ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಂತ ಉಪಕಾರಿ-ಅರುಣ ಶಹಾಪುರ
ಮಂಗಳೂರು 29 : ಇಂದು ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಡೆದ ಮೇಜರ್ ಧ್ಯಾನಚಂದ ಅವರ ಜನ್ಮದಿನದ ನಿಮಿತ್ತ ಆಚರಿಸಲಾದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತ, ಕ್ರೀಡೆ ನಮ್ಮ ಶಾರೀರಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಆದ್ದರಿಂದ ಎಲ್ಲರೂ ಕ್ರೀಡೆಯನ್ನು ಇಷ್ಟಪಡುತ್ತಾರೆ. ಇಂದಿನ ಕಾಲದಲ್ಲಿ ಎಲ್ಲರೂ ಸಹ ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಒಬ್ಬ ಉತ್ತಮ ಕ್ರೀಡಾಪಟುವಾಗಬೇಕು ಎಂದು ಬಯಸುವ ಪಾಲಕರ ಸಂಖ್ಯೆ ಕಡಿಮೆ ಇದೆ. ಒಂದು ವಿದ್ಯಾಸಂಸ್ಥೆ ಪರಿಪೂರ್ಣವಾಗಬೇಕಾದರೆ ಆ ವಿದ್ಯಾ ಸಂಸ್ಥೆಯಿಂದ ಕ್ರೀಡಾ ಸಾಧನೆಯೂ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ಹರಿದಾಸ ಕೂಳೂರು ಮಾತನಾಡಿ ಮೇಜರ್ ಧ್ಯಾನಚಂದ ಬಾಲ್ಯದಿಂದ ಕ್ರೀಡೆಯಲ್ಲಿ ತೊಡಗಿದವರಲ್ಲದಿದ್ದರೂ ಸಹ ತಮ್ಮ ಕ್ರೀಡಾ ಸಾಧನೆಯ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ಆದರೆ ವಿದ್ಯಾರ್ಥಿಗಳು ತಮ್ಮ ಚಿಕ್ಕ ವಯಸ್ಸಿನಿಂದಲೇ ಕ್ರೀಡಾ ಸಾಧನೆ ಆರಂಭಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಪಾಲಕರ ಒಂದು ಮಾತು ಮಿಲ್ಕಾ ಸಿಂಗ್ನನ್ನು ವಿಶ್ವದ ಉತ್ತಮ ಕ್ರೀಡಾಪಟುವಾದರು. ಕ್ರೀಡೆಗೆ ವಯೋನಿರ್ಬಂಧ ಇಲ್ಲ. ಯಾವ ಅಡೆತಡೆಗಳೂ ಕ್ರೀಡಾ ಸಾಧನೆಗೆ ತೊಂದರೆ ಆಗುವುದಿಲ್ಲ. ನಾವು ನಮ್ಮ ಮನಸ್ಸಿನಲ್ಲಿ ದೃಢವಾದ ನಿರ್ಧಾರ, ನಿರಂತರವಾದ ಪರಿಶ್ರಮ ಹಾಗೂ ಏಕಾಗ್ರತೆಯಿಂದ ನಾವು ಎಂತಹ ಸಾಧನೆಯನ್ನೂ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್ ವಹಿಸಿದ್ದರು. ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜವಿಜ್ಞಾನ ಶಿಕ್ಷಕಿ ಅಕ್ಷಿತಾ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು.