“ಸಂವಿಧಾನ ರಚನಾ ಸಮಿತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯವರು ಐದು ಜನ ಇದ್ದರು ಎಂಬುದೇ ನಮಗೆ ಹೆಮ್ಮೆ”. – ಡಾ. ಪಿ ಅನಂತಕೃಷ್ಣ ಭಟ್
ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ 75 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಮಂಗಳೂರಿನ ಕೆನರಾ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಪಿ. ಅನಂತ ಕೃಷ್ಟಭಟ್ ನೆರವೇರಿಸಿದರು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶಕ್ತಿ ವಿದ್ಯಾಸಂಸ್ಥೆಯನ್ನು ನೋಡಿದಾಗ ತ್ರಿವೇಣಿ ಸಂಗಮ ಎಂಬ ಭಾವನೆ ಬರುತ್ತಿದೆ. ಇಲ್ಲಿ ಮೂರು ವಯೋಮಾನದವರ ಸಂಗಮ ದೇಶದ ಭವಿಷ್ಯಕ್ಕೆ ಉತ್ತಮವಾದ ಕೊಡುಗೆ. ಈ ಶುಭ ದಿನ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ. ಈ ಸಂವಿಧಾನದ ಕರಡು ಸಮಿತಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಿರ್ಮಾಣವಾಗಿತ್ತು. ಆ ಸಮಿತಿಯಲ್ಲಿ ನಮ್ಮ ಜಿಲ್ಲೆಯ ಐದು ಮಂದಿ ಆ ಸಮಿತಿಯಲ್ಲಿ ಇದ್ದರು ಎಂಬುದೇ ನಮಗೆ ಹೆಮ್ಮೆ ಎಂದು ನುಡಿದರು. ವಿದ್ಯಾರ್ಥಿಗಳು ಸಮಾಜದ ಋಣವನ್ನು ತೀರಿಸಲು ನಮ್ಮ ಜೀವನದಲ್ಲಿ ಪ್ರಯತ್ನಿಸಬೇಕು.
ವಿದ್ಯಾರ್ಥಿಗಳು ಐದು ರೂಪಾಯಿಗಳ ನಾಣ್ಯದಂತೆ ನಮ್ಮ ಅಭಿವೃದ್ಧಿಯನ್ನು ಹಾಗೂ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡುವ ಎರಡು ಮುಖಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ದೇಶದ ರಕ್ಷಣೆಗೆ ನಾವು ಸಿದ್ಧರಾಗಬೇಕು. ತೋಟದಲ್ಲಿ ಅರಳುವ ಹೂವುಗಳಂತೆ ದೇಶದ ಅಭಿವೃದ್ಧಿಗೆ ನಾವು ಸಹಕಾರಿಯಾಗಬೇಕು ಎಂದು ಹೇಳಿದರು. ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು ನಮ್ಮ ಸಂವಿಧಾನ ಜಗತ್ತಿಗೆ ಅತಿ ದೊಡ್ಡದಾಗಿರುವ ಸಂವಿಧಾನವಾಗಿದೆ. ಈ ಪುಸ್ತಕದಲ್ಲಿ ನಾವು ಯಾವ ರೀತಿಯಲ್ಲಿ ನಮ್ಮ ಹಕ್ಕನ್ನು ಚಲಾವಣೆ ಮಾಡಬೇಕು. ಇದನ್ನು ತಿಳಿದುಕೊಂಡಾಗ ಮಾತ್ರ ನಾವು ಉತ್ತಮ ಪ್ರಜೆಗಳಾಗಿ ಮುಂದೆ ಬರಲು ಸಾಧ್ಯವಿದೆ. ಆದ್ದರಿಂದ ನಾವೆಲ್ಲರೂ ಸಂವಿಧಾನವನ್ನು ಅಧ್ಯಯನ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ. ಸಿ ನಾೖಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶಮೂರ್ತಿ ಹೆಚ್, ಶಕ್ತಿ ವಸತಿಶಾಲೆಯ ಪ್ರಾಂಶುಪಾಲರಾದ ರವಿಶಂಕರ ಹೆಗಡೆ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ಶರಣಪ್ಪ ಕಾರ್ಯಕ್ರಮ ನಿರ್ವಹಿಸಿದರು.