ಶಕ್ತಿ ಪ. ಪೂ. ಕಾಲೇಜಿನ ಜೆಇಇ ಮತ್ತು ಕ್ಲಾಟ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ.ನಾಕ್ ರಿಂದ ನಗದು ಬಹುಮಾನದ ಮೂಲಕ ಗೌರವ ಸಮರ್ಪಣೆ
ಮಂಗಳೂರು ಫೆ. 23 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿಗಳು 2024 ರಲ್ಲಿ ಜರುಗಿದ ಜೆ.ಇ.ಇ. ಮತ್ತು ಕ್ಲಾಟ್‌ನಲ್ಲಿ ಉತ್ತಮವಾಗಿರುವ ಸಾಧನೆಯನ್ನು ಮಾಡಿರುವುದಕ್ಕೆ ಅವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಇಂದು ಆಯೋಜಿಸಿತು. ಜೆ.ಇ.ಇನಲ್ಲಿ 99.82 ಪರ್ಸಂಟೈಲ್ ಪಡೆದ ರೋಹಿತ್ ಕಲ್ಲೂರಾಯ ಇವರಿಗೆ ರೂ. 50000 ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅದೇ ತರಹ 96.05 ಪರ್ಸಂಟೈಲ್ ಪಡೆದ ಪ್ರತಿಕ್ಷಾ ಬಿ.ಪಿ.ರವರಿಗೆ ರೂ. 20000 ನಗದು, 90.48 ಪರ್ಸಂಟೈಲ್ ಪಡೆದ ಪ್ರಥಮೇಶರಿಗೆ ರೂ. 6000 ನಗದು, 92.34 ಪರ್ಸಂಟೈಲ್ ಪಡೆದ ಸಚಿನ್ ಇವರಿಗೆ ರೂ. 6000 ನಗದು, 88.32% ಪಡೆದ ಹಿತೇಶ್ ಕುಮಾರರಿಗೆ ರೂ. 3000 ನಗದು, 88.09 ಪರ್ಸಂಟೈಲ್ ಪಡೆದ ಲಿಂಗರಾಜ ಆನಂದ ಪಿ. ರೂ. 3000 ನಗದು, 87.60 ಪರ್ಸಂಟೈಲ್ ಪಡೆದ ವೈಭವ್ ಡಿ.ಜೆ. ರೂ. 3000 ನಗದು, 86.10 ಪರ್ಸಂಟೈಲ್ ಪಡೆದ ಪ್ರಾಣೇಶ್ ರೂ. 3000 ನಗದು ಮತ್ತು 86.10 ಪರ್ಸಂಟೈಲ್ ವಿನಯ್ ಕುಮಾರ್ ರಿಗೆ ರೂ. 3000 ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಒಟ್ಟು 23 ವಿದ್ಯಾರ್ಥಿಗಳು ಜೆಇಇ ಪರೀಕ್ಷೆ ಬರೆದಿದ್ದು, ಇದರಲ್ಲಿ 8 ಜನರು ಜೆಇಇ ಅಡ್ವಾನ್ಸ್‌ಗೆ ಅರ್ಹತೆ ಪಡೆದಿರುವುದು, ಸಂಸ್ಥೆಯ ಸಾಧನೆಯಾಗಿದೆ. ರಾಷ್ಟ್ರೀಯ ಕಾನೂನು ವಿದ್ಯಾಲಯಕ್ಕೆ ನಡೆಯುವ ಕ್ಲಾಟ್‌ನಲ್ಲಿ ಶಕ್ತಿ ಪಪೂ ಕಾಲೇಜಿನ 3 ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ನೊಂದಿಗೆ ಆಯ್ಕೆಯಾಗಿರುತ್ತಾರೆ. ನಿಧಿ ದೇಸಾಯಿ 3089 ರ್‍ಯಾಂಕ್ ಪಡೆದಿದ್ದು ಇವರಿಗೆ ರೂ.4000 ನಗದು, ಅನಘಾ ಹೆಚ್.ಆರ್ 4636 ರ್‍ಯಾಂಕ್ ಪಡೆದಿದ್ದು ಇವರಿಗೆ ರೂ. 3000 ನಗದು, ಪುಷ್ಪಾಂಜಲಿ 7988 ರ್‍ಯಾಂಕ್ ಪಡೆದಿದ್ದು ಇವರಿಗೆ ರೂ. 2000 ನಗದು ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಅಭಿನಂದನಾ ಭಾಷಣ ಮಾಡಿದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ.ಕೆ ಶಕ್ತಿ ಪಪೂ ಕಾಲೇಜಿನ ಜೆಇಇ ಮತ್ತು ಕ್ಲಾಟ್‌ನ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸಿರುವ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾಕ್‌ರ ಗುಣವನ್ನು ಶ್ಲಾಘಿಸಿದರು. ಇನ್ನು ಮುಂದೆ ಸಾಧನೆ ಮಾಡಬೇಕೆಂಬ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗಿರುತ್ತದೆ. ಇದರಿಂದ ಪ್ರೇರಣೆ ಪಡೆದು ಅನೇಕರು ಮುಂದಿನ ದಿನಗಳಲ್ಲಿಯು ಸಾಧನೆ ಮಾಡುಬಹುದು. ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡುವುದೆಂದರೆ ಅದು ಸುಲಭದ ವಿಷಯವಲ್ಲ. ಆದರೆ ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿಗಳೂ ನಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಇಂತಹ ಸಾಧನೆ ಮಾಡಿರುವುದು ಅಭಿನಂದನೀಯವಾಗಿದೆ. ಮುಂದಿನ ದಿನಗಳಲ್ಲಿ ಸಿಬಿಎಸ್‌ಇ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯು ಎಲ್ಲರೂ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ ಡಾ. ಕೆ.ಸಿ.ನಾೖಕ್ ಮಾತನಾಡಿ ನಾನು ನಿರಂತರ ನಿಮ್ಮ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತೇನೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅಭಿವೃಧ್ಧಿ ನನ್ನ ಗುರಿ. ಅದನ್ನು ಸಾಧಿಸಿದಾಗ ಮಾತ್ರ ಸಂಸ್ಥೆಯು ತನ್ನಿಂತಾನೆ ಅಭಿವೃದ್ಧಿ ಹೊಂದುತ್ತದೆ. ಇದಕ್ಕೆ ನನ್ನ ವಯಸ್ಸನ್ನು ಪರಿಗಣಿಸದೆ ನಾನು ಕೆಲಸ ಮಾಡಲು ಸಿದ್ಧ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ನಾನು ಕಣ್ಣಾರೆ ಕಂಡು ಖುಷಿ ಪಡುವ ವ್ಯಕ್ತಿತ್ವ ನನ್ನದು. ನಿಮ್ಮಿಂದ ನಾನು ಅಪೇಕ್ಷೆ ಪಡುವುದು ಇದನ್ನೇ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬರುವ ನೀಟ್, ಸಿಇಟಿ, ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಹಾಗೂ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವವರನ್ನು ನಾನು ಗುರುತಿಸುತ್ತೇನೆಂದು ಕರೆ ನೀಡಿದರು.
ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್ ಶುಭ ಹಾರೈಸಿದರು. ವೇದಿಕೆಯಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ ಹೆಗಡೆ ಉಪಸ್ಥಿತರಿದ್ದರು.
ಶಕ್ತಿ ಪಪೂ ಕಾಲೇಜಿನ ಉಪ ಪ್ರಾಂಶುಪಾಲೆ ದಿವ್ಯಜ್ಯೋತಿ ಸ್ವಾಗತಿಸಿ, ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.