ದಿನಾಂಕ 13-7-2024 ರಂದು ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಹಾಗೂ ಬಾಲ್ಯ ವಿವಾಹದ ಕುರಿತು ಜಾಗೃತಿ ಕಾರ್ಯಗಾರ ಶನಿವಾರದಂದು ನಡೆಯಿತು.
ಮಕ್ಕಳ ರಕ್ಷಣೆಯ ನಿರ್ಣಾಯಕ ಅಂಶಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಉಪನ್ಯಾಸಕರಿಗೆ ಅರಿವು ಮೂಡಿಸಲಾಯಿತು.
ಎಸ್ಡಿಎಂ ಕಾನೂನು ಕಾಲೇಜಿನ ಪಿಜಿ ವಿಭಾಗದ ಪ್ರಾಧ್ಯಾಪಕರಾಗಿರುವ ಶ್ರೀಮತಿ ಶಾರಿಕ ರೈ ಇವರು ಮಾತನಾಡಿ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹದ ಕುರಿತು ವಿವರಿಸಿದರು.
ಲೈಂಗಿಕ ಕಿರುಕುಳ ಎಂದರೆ ಕೇವಲ ದೈಹಿಕವಾದ ಕಿರುಕುಳ ಅಷ್ಟೇ ಅಲ್ಲದೆ ಅಸಭ್ಯ ಮಾತು ಹಾಗೂ ಚಿತ್ರೀಕರಣ ತೋರಿಸುವುದು ಕೂಡಾ ಲೈಂಗಿಕ ದೌರ್ಜನ್ಯ ಎಂದು ಅವರು ಹೇಳಿದರು.
ಅಪರಾಧ ನಡೆದಲ್ಲಿ ಯಾವ ರೀತಿ ಕಾನೂನಿನಲ್ಲಿ ಶಿಕ್ಷೆಯಾಗುತ್ತದೆ ಎಂಬುದರ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಗಾರವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೆಂಕಟೇಶ ಮೂರ್ತಿ ಯವರು ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ದಿವ್ಯಜ್ಯೋತಿ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಶ್ರೀ ಸುನಿಲ್ ಇವರು ನಿರೂಪಣೆಯ ಜೊತೆಗೆ ಸ್ವಾಗತಿಸಿ, ವಂದನಾರ್ಪಣೆಯನ್ನು ಮಾಡಿದರು.