Call Us :
+91 96860 00046
+91 9108043552
info@shakthi.edu.in

Virtual Inauguration of Coaching for CA Foundation and CS

“Believe in yourself and there is nothing that can stop you from succeeding. If you decide you want to do it, you can do it. You are at the right place. Utilise the facilities at Shakthi PU College, together with KVC it would be a fantastic formula for your success.” said CA Kiran Vasanth inaugurating the virtual coaching for CA Foundation and CS.

“Every journey begins with the first step. Your first step starts in I PU. Be positive, give a clean commitment for the next four or five years, you will be in possession with a degree that you can’t imagine what power it has. Money will go away, assets will go away but knowledge will always remain. This certificate will help you to get what you want. You have a dream to keep your family members more comfortable. This is the greatest way to do it” he added.

“Our assets are our faculties. We wish to make positive difference to our students. We go out of our way to ensure they become efficient CA’s” he assured.

CA Deepika Vasani addressing the students said that “Choosing to start earlier is always a better option. We are here to help the students to help themselves. CA course may be difficult or may not be difficult, but you will definitely regret if you just push it away without even trying it. CA Foundation course will prepare you for any competitive exam in future. A delay in success is also a delay in earning, so it’s better to start in PU itself than after degree”.

Sanjith Naik, Secretary of Shakthi Education Trust expressed his happiness to be associated with the KVC Academy and wished for a fruitful outcome for all the stakeholders with the learning becoming more interactive, exploratory and experiential under the collaboration with KVC Academy. He added that Shakthi PU College along with the focus on Engineering and Medicine would like to expand in different fields and create more options to the aspirants.

Prof. T. Rajaram Rao, Principal of Shakthi PU College requested the students to make use of this opportunity and fulfil their dreams with absolute dedication and devotion to the subjects of their choice.

A series of questions raised by the students, teachers and the parents were authentically answered by CA Kiran Vasanth and CA Deepika Vasani.

Dr.K.C.Naik, the Administrator, Ramesh K, the Chief Advisor, Prakyath Rai, Institute Development Officer, Vidya Kamath G, Principal Shakthi Residential School, Neema Saxena, Co-ordinator of Shakthi Pre-School along with teaching fraternity, students and parents connected virtually.

Raksha M.Holla and Deeksha M.Holla, students of II PU Commerce invoked the blessings of the almighty. Shilpa, Lecturer in Commerce compered the show.

ಶಕ್ತಿ ಪಪೂ ಕಾಲೇಜಿನ ವಾಣಿಜ್ಯ ವಿಭಾಗದ ಸಿಎ/ಸಿಎಸ್ ಫೌಂಡೇಶನ್ ಕೋಚಿಂಗ್ ಆನ್‌ಲೈನ್‌ನಲ್ಲಿ ಉದ್ಘಾಟನೆ

ಆತ್ಮವಿಶ್ವಾಸ ನಮ್ಮಲ್ಲಿದ್ದಾಗ ನಮ್ಮ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ. ಆಗ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಪ್ರಾಪ್ತಿಯಾಗುವುದು. ಶಕ್ತಿ ಪಿಯು ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಿ, ಕೆವಿಸಿ ಜೊತೆಗೆ ಇದು ನಿಮ್ಮ ಯಶಸ್ಸಿಗೆ ಅದ್ಭುತ ಸೂತ್ರವಾಗಿದೆ ಎಂದು ಸಿಎ ಫೌಂಡೇಶನ್ ಮತ್ತು ಸಿಎಸ್‌ಗಾಗಿ ವರ್ಚುವಲ್ ಕೋಚಿಂಗ್ ಅನ್ನು ಉದ್ಘಾಟಿಸಿ ಸಿಎ ಕಿರಣ್ ವಸಂತ್ ಮಾತನಾಡಿದರು.

ಪ್ರತಿ ಪ್ರಯಾಣವು ಮೊದಲ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ನಿಮ್ಮ ಮೊದಲ ಹೆಜ್ಜೆ ಪ್ರಥಮ ಪಿಯುಸಿನಲ್ಲಿ ಪ್ರಾರಂಭವಾಗುತ್ತದೆ. ಸಕಾರಾತ್ಮಕವಾಗಿರಿ, ಮುಂದಿನ ನಾಲ್ಕು ಅಥವಾ ಐದು ವರ್ಷಗಳವರೆಗೆ ನಿಮ್ಮ ಬದ್ಧತೆಯನ್ನು ನೀಡಿ, ನೀವು ಯಾವ ಶಕ್ತಿಯನ್ನು ಹೊಂದಿದ್ಧೀರಿ ಎಂದು ಊಹಿಸಲಾಗದಷ್ಟು ಬೇಗ ಪದವಿಯನ್ನು ನೀವು ಹೊಂದಿರುತ್ತೀರಿ. ಹಣವು ಹೋಗುತ್ತದೆ, ಸ್ವತ್ತುಗಳು ಹೋಗುತ್ತವೆ ಆದರೆ ಜ್ಞಾನವು ಯಾವಾಗಲೂ ಉಳಿಯುತ್ತದೆ. ನಿಮಗೆ ಬೇಕಾದುದನ್ನು ಪಡೆಯಲು ಸಿಎ ಪ್ರಮಾಣಪತ್ರವು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕುಟುಂಬ ಸದಸ್ಯರನ್ನು ಹೆಚ್ಚು ಆರಾಮವಾಗಿಡಲು ನಿಮ್ಮ ಕನಸು ಸಹಕರಿಸುತ್ತದೆ. ಇದು ಅತ್ಯುತ್ತಮ ಜೀವನ ನಿರ್ಮಾಣ ಮಾರ್ಗವಾಗಿದೆ ಎಂದು ಅವರು ಹೇಳಿದರು.

ನಮ್ಮ ಅಧ್ಯಾಪಕರು ನಮ್ಮ ಆಸ್ತಿ. ನಮ್ಮ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನುಂಟು ಮಾಡಲು ನಾವು ಬಯಸುತ್ತೇವೆ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿಎ ದೀಪಿಕಾ ವಸಾನಿ, ಸಿಎ ವ್ಯಾಸಂಗವನ್ನು ಪಿಯುಸಿ ಹಂತದಲ್ಲಿಯೇ ಪ್ರಾರಂಭಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ನಾವು ಯಾವಾಗಲೂ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಿದ್ಧಹಸ್ತರು. ಸಿಎ ಕೋರ್ಸ್ ಕಷ್ಟವಾಗಬಹುದು ಅಥವಾ ಕಷ್ಟವಾಗದಿರಬಹುದು, ಆದರೆ ನೀವು ಅದನ್ನು ಪ್ರಯತ್ನಿಸದೆ ದೂರ ತಳ್ಳಿದರೆ ನೀವು ಖಂಡಿತವಾಗಿಯೂ ವಿಷಾದಿಸುತ್ತೀರಿ. ಸಿಎ ಫೌಂಡೇಶನ್ ಕೋರ್ಸ್ ಭವಿಷ್ಯದಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮನ್ನು ಸಿದ್ಧಪಡಿಸುತ್ತದೆ. ಯಶಸ್ಸಿನ ವಿಳಂಬವು ಗಳಿಕೆಯ ವಿಳಂಬವೂ ಆಗಿದೆ, ಆದ್ದರಿಂದ ಪಿಯುಸಿಯಲ್ಲಿಯೇ ಪ್ರಾರಂಭಿಸುವುದು ಉತ್ತಮ.

ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸಂಜಿತ್ ನಾೖಕ್‌ ಅವರು ಕೆವಿಸಿ ಅಕಾಡೆಮಿಯೊಂದಿಗೆ ಸಂಯೋಜನೆ ಹೊಂದಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಕೆವಿಸಿ ಅಕಾಡೆಮಿಯ ಸಹಯೋಗದೊಂದಿಗೆ ಕಲಿಕೆಯ ಹೆಚ್ಚು ಸಂವಾದಾತ್ಮಕ, ಪರಿಶೋಧನಾತ್ಮಕ, ಪರಿಣಾಮಕಾರಿಯಾಗಿರುವುದು ಮತ್ತು ಅನುಭವಿ ಶಿಕ್ಷಕ ವೃಂದವು ಎಲ್ಲಾ ವಿದ್ಯಾರ್ಥಿಗಳಿಗೆ ಫಲಪ್ರದ ಫಲಿತಾಂಶವನ್ನು ನೀಡಲಿ ಎಂದು ಹಾರೈಸಿದರು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ರಂಗವನ್ನು ಕೇಂದ್ರೀಕರಿಸುವ ಜೊತೆ ಜೊತೆಗೆ ಶಕ್ತಿ ಪಿಯು ಕಾಲೇಜು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸುವುದು ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ಅವರು ಹೇಳಿದರು.

ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ರಾಜರಾಮ್ ರಾವ್ ಅವರು ವಿದ್ಯಾರ್ಥಿಗಳಿಗೆ ಅವಕಾಶವನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಕನಸುಗಳನ್ನು ಸಹಕಾರಗೊಳಿಸಲು ಆಯ್ಕೆಯ ವಿಷಯಗಳ ಬಗ್ಗೆ ಸಂಪೂರ್ಣ ಸಮರ್ಪಣಾ ಭಾವನೆಯಿಂದ ಕಾರ್ಯಪ್ರಾಪ್ತಿಯೆಡೆಗೆ ಪ್ರಯತ್ನಿಸಬೇಕು ಎಂದು ವಿನಂತಿಸಿದರು. ಸಿಎ ಕಿರಣ್ ವಸಂತ್ ಮತ್ತು ಸಿಎ ದೀಪಿಕಾ ವಸಾನಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಎತ್ತಿದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿದರು.

ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ಪಿಯು ವಾಣಿಜ್ಯ ವಿದ್ಯಾರ್ಥಿಗಳಾದ ರಕ್ಷಾ ಎಂ. ಹೊಳ್ಳ ಮತ್ತು ದೀಕ್ಷಾ ಎಂ. ಹೊಳ್ಳ ಅವರು ಪ್ರಾರ್ಥನೆ ಹಾಡಿದರು. ವಾಣಿಜ್ಯ ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery