Call Us :
+91 96860 00046
+91 9108043552
info@shakthi.edu.in

Virtual Inauguration of Online CLAT sessions at Shakthi PU College

“Sky is the limit for those who pursue Law. The quality of education and exposure given at law school is high. Hard work, determination and enthusiasm is essential to get into Law School. One gets an opportunity to interact with Senior Advocates. Teaching options are also available. Even MNC’s look for quality candidates to fill company legal positions” said Sri Arun Shyam, Additional Advocate General, Government of Karnataka also the Member of the Academic Council at National Law School of India University(NLSIU) inaugurating the Online CLAT sessions at Shakthi PU College.

“It is a Learned Profession, those who are keen in learning law must understand that the study element is huge and satisfying. I wish that every lawyer must study the making of our Constitution. The knowledge of the 5 volumes of Constitutional Debate study is very essential to comprehend the reason behind the country of liberty, country of equality, country of freedom and so on. Constitution is of paramount importance. Despite all shortcomings the Indian Constitution has survived for seven and a half decades now while SriLanka has seen the fourth edition of its Constitution” stated Chief Guest, Santosh Paul Designated Senior Counsel, Supreme Court of India.

Vivekananda Paniyala, Advocate Paniyala and Associates briefed the aspirants with the scope and avenues for a Law Graduate. He also provided information about the syllabussuch as G.K, Legal GK, Current affair, Elementary Mathematics which is based on Numerical Ability, Legal Aptitude, English including Comprehension, Quantitative Aptitude and Legal Reasoning that is required to face the exam. Sanath Bhandarkar along with the guests answered queries raised by the students and the Parents.

“Shakthi is doing its best to nurture varied interests of its students. Along with the international level infrastructure, the academics is also strengthened from time to time. Additional study in their respective field of interest is made available to our students in the form of SAL, SRF, and CA Foundation. Now, CLAT study is materialising in association with Mangalore Legal Academy. It is a matter of pride to be associated with Vivekananda Paniyala who has taken the initiative of guiding our students. The presence of Learned Men like Santosh Paul and Arun Shyam has added more glory to this occasion said Dr. K.C.Naik, the Administrator of Shakthi Education Trust in his Presidential address.

Raksha Holla and Deeksha Holla began the session with a prayer. Shilpa S, Lecturer in Commerce and Co-ordinator of Shakthi Commerce Advanced Learning compered the event.

Sanjith Naik, Secretary of Shakthi Education Trust, Prof. T. Rajaram Rao, Principal of Shakthi PU College, Ramesh K, Chief Advisor, Prakyath Rai, Institute Development Officer, Vidya Kamath G, Principal Shakthi Residential School, Neema Saxena, Co-ordinator of Shakthi Pre-School along with teaching fraternity, students and parents participated virtually.

ಶಕ್ತಿ ಪಪೂ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಕಾನೂನು ವಿದ್ಯಾಭ್ಯಾಸಕ್ಕಾಗಿ ಆನ್‌ಲೈನ್ ಕ್ಲಾಟ್ ತರಬೇತಿ ಉದ್ಘಾಟನೆ

ಮಂಗಳೂರು ಜು 8 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದೇಶದ ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಸೀಟು ಪಡೆಯುವಂತಾಗಲು ಕ್ಲಾಟ್ ತರಬೇತಿಯನ್ನು ಹೊಂದಬೇಕಾಗುತ್ತದೆ. ಆದ್ದರಿಂದ ಮಂಗಳೂರು ಲೀಗಲ್ ಅಕಾಡೆಮಿಯ ಸಹಯೋಗದೊಂದಿಗೆ ಕ್ಲಾಟ್ ತರಬೇತಿಯನ್ನು ಆನ್‌ಲೈನ್‌ನಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಎಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಉದ್ಘಾಟಿಸಿದರು. ಕಾನೂನನ್ನು ಅಧ್ಯಯನ ಮಾಡಲು ಹೆಚ್ಚಿನ ಅವಕಾಶಗಳಿವೆ. ಕಾನೂನು ಶಾಲೆಗೆ ಪ್ರವೇಶ ಪಡೆಯಲು ಕಠಿಣ ಪರಿಶ್ರಮ, ದೃಢ ನಿರ್ಧಾರ ಮತ್ತು ಉತ್ಸಾಹ ಅತ್ಯಗತ್ಯ. ಹಿರಿಯ ವಕೀಲರೊಂದಿಗೆ ಸಂವಹನ ನಡೆಸಲು ಅವಕಾಶಗಳು ಸಿಗುತ್ತದೆ. ವಿವಿಧ ತರದ ಕಾನೂನು ಅಧ್ಯಯನ ಸೇರಿದಂತೆ ಎಲ್ಲಾ ಅವಕಾಶಗಳು ಕ್ಲಾಟ್‌ನ ತರಬೇತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕದ ಮೇಲೆ ನಿಗದಿಯಾಗಿರುತ್ತದೆ. ಇದರಲ್ಲಿ ಸಾಧನೆ ಮಾಡಿದಾಗ ದೇಶದ ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಸೀಟು ಪಡೆಯಲು ಸಾಧ್ಯವಿದೆ. ಎಲ್ಲರೂ ಈ ನಿಟ್ಟಿನಲ್ಲಿ ಶಕ್ತಿ ಪಪೂ ಕಾಲೇಜಿನ ಕ್ಲಾಟ್‌ನ ತರಬೇತಿ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಸಂತೋಷ ಪೌಲ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ನಮ್ಮ ಸಂವಿಧಾನದ ರಚನೆಯನ್ನು ಅಧ್ಯಯನ ಮಾಡಬೇಕು. ಯಾರು ಕಾನೂನನ್ನು ಅಧ್ಯಯನ ಮಾಡುತ್ತಾರೋ ಅವರು ಕಾನೂನಿನ ಕಲಿಕೆಯಲ್ಲಿ ಆಸಕ್ತಿ ಹೊಂದುತ್ತಾರೆ. ಸ್ವಾತಂತ್ರ ದೇಶ, ಸಮಾನತೆಯ ದೇಶದ ಕುರಿತಂತೆ ಅಧ್ಯಯನ ಮಾಡಲು ಸಾಂವಿಧಾನಿಕ ಚರ್ಚಾ ಅಧ್ಯಯನದ 5 ಸಂಪುಟಗಳ ಜ್ಞಾನವು ಬಹಳ ಅವಶ್ಯಕವಾಗಿದೆ. ಸಂವಿಧಾನವು ಅತ್ಯಂತ ಮಹತ್ವದ್ದಾಗಿದೆ. ಎಲ್ಲಾ ನ್ಯೂನತೆಗಳ ಹೊರತಾಗಿಯೂ, ಭಾರತೀಯ ಸಂವಿಧಾನವು ಏಳೂವರೆ ದಶಕಗಳಿಂದ ಉಳಿದುಕೊಂಡಿದೆ, ಆದರೆ ಶ್ರೀಲಂಕಾ ತನ್ನ ಸಂವಿಧಾನದ ನಾಲ್ಕನೇ ಆವೃತ್ತಿಯನ್ನು ಕಂಡಿದೆ ಎಂದು ಅವರು ಹೇಳಿದರು.

ಮಂಗಳೂರು ಲೀಗಲ್ ಅಕಾಡೆಮಿಯ ವಿವೇಕಾನಂದ ಪನಿಯಾಲಾ ವಕೀಲರು ಮಾತನಾಡಿ ಕ್ಲಾಟ್ ತರಬೇತಿಯ ವಿದ್ಯಾರ್ಥಿಗಳಿಗೆ ಕಾನೂನು ಪದವೀಧರರ ವ್ಯಾಪ್ತಿ ಮತ್ತು ಮಾರ್ಗಗಳ ಕುರಿತಂತೆ ವಿವರಿಸಿದರು. ಪ್ರಸ್ತುತ ವಿಚಾರಗಳು, ಎಲಿಮೆಂಟರಿ ಲೆಕ್ಕಚಾರದಂತಹ ಪಠ್ಯಕ್ರಮದ ಬಗ್ಗೆ ಸಂಖ್ಯಾತ್ಮಕ ಸಾಮರ್ಥ್ಯ, ಲೀಗಲ್ ಆಪ್ಟಿಟ್ಯೂಡ್, ಕಾಂಪ್ರಹೆನ್ಸನ್ ಸೇರಿದಂತೆ ಇಂಗ್ಲೀಷ್ ಪರೀಕ್ಷೆಯನ್ನು ಎದುರಿಸಲು ಅಗತ್ಯವಿರುವ ಪರಿಮಾಣಾತ್ಮಕ ಆಪ್ಟಿಟ್ಯೂಡ್ ಮತ್ತು ಕಾನೂನು ಜ್ಞಾನದ ಕುರಿತಂತೆ ವಿವರಿಸಿದರು. ವಿದ್ಯಾರ್ಥಿಗಳು ಮತ್ತು ಪೋಷಕರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಅಧ್ಯಕ್ಷತೆ ವಹಿಸಿದ ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್‌ ಮಾತನಾಡಿ ಶಕ್ತಿ ತನ್ನ ವಿದ್ಯಾರ್ಥಿಗಳ ವೈವಿಧ್ಯಮಯ ಹಿತಾಸಕ್ತಿಗಳನ್ನು ಬೆಳೆಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳ ಜೊತೆಗೆ ನಮ್ಮ ಶಿಕ್ಷಣ ವ್ಯವಸ್ಥೆಯು ಸಹ ಕಾಲ ಕಾಲಕ್ಕೆ ಬಲಗೊಳ್ಳುತ್ತಿದೆ. ಆಯಾ ಆಸಕ್ತಿಯ ಕ್ಷೇತ್ರದಲ್ಲಿ ಹೆಚ್ಚುವರಿ ಅಧ್ಯಯನವನ್ನು ನಮ್ಮ ವಿದ್ಯಾರ್ಥಿಗಳಿಗೆ ಎಸ್‌ಎಎಲ್, ಎಸ್.ಆರ್.ಎಫ್ ಮತ್ತು ಸಿಎ ಫೌಂಡೇಶನ್ ರೂಪದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈಗ ಮಂಗಳೂರು ಕಾನೂನು ಅಕಾಡೆಮಿಯ ಸಹಯೋಗದೊಮದಿಗೆ ಕ್ಲಾಟ್ ಅಧ್ಯಯನವು ಕಾರ್ಯ ರೂಪಕ್ಕೆ ಬರುತ್ತಿದೆ.

ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌, ಮುಖ್ಯ ಸಲಹೆಗಾರ ರಮೇಶ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಟಿ. ರಾಜಾರಾಮ್ ರಾವ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ಜೊತೆಗೆ ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು. ಪ್ರಾರ್ಥನೆಯನ್ನು ರಕ್ಷಾ ಹೊಳ್ಳ ಮತ್ತು ದೀಕ್ಷಾ ಹೊಳ್ಳ ನೆರವೇರಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶಿಲ್ಪಾ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery