Call Us :
+91 96860 00046
+91 9108043552
info@shakthi.edu.in

Inauguration of two days Seminar on NEP 2020  

Mangaluru, 01.07.2022 : Dakshina Kannada Pre-University Colleges Principal’s Association in collaboration with Chanakya University, Vidya Bharathi & Shakthi PU College witnessed the inauguration of two days seminar on National Education Policy- 2020, its Opportunities and Challenges.

“The main aim of NEP 2020 is to enable personal accomplishment and enlightenment, constructive public engagement, and productive contribution to the society” said Dr. M.K.Sridhar, Founder Chancellor, Chanakya University & Vice President, NEP Committee for Draft in his keynote address.

Dr. Sandeep Nair,Registrar(Evaluation), Chanakya University inaugurated the seminar and said that “ NEP 2020 contributes directly to transforming India, into an equitable and vibrant knowledge society, by providing high-quality education to all”.

C.D.Jayanna Deputy Director of Pre University Education, DK District was the Chief Guest. He conveyed his good wishes to the organisers and the participants of this programme. Dr. K.C.Naik Administrator of Shakthi Education Trust presided over the function. Venkatesh, Section Officer of Pre University Education Board, Gangadhar Alva K.N. President of DKPU Principals Association, Ramesh K, Chief Advisor of Shakthi Education Trust, PrathviRaj, Principal Shakthi PU College, Jayanthi Soans, President of HMs Association of Higher Secondary Schools Mangaluru South and other office bearers of DKPU Principal’s Association were present on this occasion.

Principals and lecturers from 200 colleges of DK District are the beneficiaries of this seminar. Gangadhar Alva K.N. President of DKPU Principals Association welcomed the gathering. Vinayak, Vice President of DKPU Principals Association proposed the vote of thanks. The Secretary of DKPU Principals Association, Yousuf compered the event.

ಸಾಮೂಹಿಕ ಪರಿವರ್ತನೆಯಿಂದ ಸಮಾಜ ಪರಿವರ್ತನೆ – ಎಂ.ಕೆ ಶ್ರೀಧರ್

ಮಂಗಳೂರು ಜು. 1 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನಲ್ಲಿ ದ.ಕ ಪಪೂ ಪ್ರಾಚಾರ್ಯರ ಸಂಘ, ಚಾಣಕ್ಯ ವಿಶ್ವವಿದ್ಯಾನಿಲಯ, ವಿದ್ಯಾ ಭಾರತಿ ಮತ್ತು ಶಕ್ತಿ ಪಪೂ ಕಾಲೇಜಿನ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ರಲ್ಲಿನ ಅವಕಾಶಗಳು ಮತ್ತು ಸವಾಲುಗಳು ಎಂಬ ಎರಡು ದಿನಗಳ ವಿಚಾರ ಸಂಕೀರಣದ ಉದ್ಘಾಟನೆಯು ನಡೆಯಿತು.

ರಾಷ್ಟ್ರೀಯ ಶಿಕ್ಷಣ ನೀತಿ – 2020 ರ ಪ್ರಮುಖ ಉದ್ದೇಶ ಮಾನವ ಶಕ್ತಿಯ ವೃದ್ಧಿ. ಪ್ರತಿಯೊಬ್ಬನ ಪರಿಣತ ಜ್ಞಾನವು ತೆರೆದು ಕೊಂಡಾಗ ಸಾಮೂಹಿಕ ಪರಿವರ್ತನೆಯಿಂದ ಸಮಾಜ ಪರಿವರ್ತನೆಯಾಗುತ್ತದೆ ಎಂದು ಚಾಣಕ್ಯ ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಪತಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕರಡು ಸಮಿತಿಯ ಉಪಾಧ್ಯಕ್ಷರಾದ ಎಂ.ಕೆ ಶ್ರೀಧರ್ ಅವರು ನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಡೆದ ’ರಾಷ್ಟ್ರೀಯ ಶಿಕ್ಷಣ ನೀತಿ – 2020 ರಲ್ಲಿನ ಅವಕಾಶಗಳು ಮತ್ತು ಸವಾಲುಗಳು ಎಂಬ ಎರಡು ದಿನಗಳ ಕಾಲ ನಡೆಯಲಿರುವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಅಭಿಪ್ರಾಯಪಟ್ಟರು. ಕಾರ್ಯಗಾರದ ಉದ್ಘಾಟನೆಯನ್ನು ಮಾಡಿ ಚಾಣಕ್ಯ ವಿಶ್ವವಿದ್ಯಾನಿಲಯದ ಕುಲ ಸಚಿವ (ಪರೀಕ್ಷಾಂಗ) ಶ್ರೀ ಸಂದೀಪ್ ನಾಯರ್ ಅವರು ಆಧುನಿಕ ಸಮಾಜದಲ್ಲಿ ಜ್ಞಾನಾಧಾರಿತ ಮಾನವ ಸಮುದಾಯದ ನಿರ್ಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಪ್ರಮುಖ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ವೇದಿಕೆಯಲ್ಲಿ ದ.ಕ ಪದವಿ ಪೂರ್ವ ಇಲಾಖೆಯ ನಿರ್ದೇಶಕರಾದ ಶ್ರೀ ಡಿ. ಜಯಣ್ಣ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎರಡು ದಿನಗಳ ಕಾಲ ನಡೆಯಲಿರುವ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಶ್ರೀ ಕೆ. ಸಿ. ನಾೖಕ್‌ ವಹಿಸಿದ್ದು, ವೇದಿಕೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಶ್ರೀ ವೆಂಕಟೇಶ್, ದ.ಕ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಗಂಗಾಧರ ಆಳ್ವ, ಮಂಗಳೂರು ದಕ್ಷಿಣ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಜಯಂತಿ ಸೋನ್ಸ್, ಶಕ್ತಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪೃಥ್ವಿರಾಜ್, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್.ಕೆ., ಹಾಗೂ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ಗಂಗಾಧರ ಆಳ್ವ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಯೂಸುಫ್ ಅವರು ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷರಾದ ವಿನಾಯಕ್ ವಂದಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery