Call Us :
+91 96860 00046
+91 9108043552
info@shakthi.edu.in

Former Karnataka Lokayukta Justice N. Santosh Hegde Engages with Students at Shakthi Institute

August 28: Karnataka Former Lokayukta Justice N. Santosh Hegde interacted with students today at Shakthi Institute in Shakhinagar, Mangaluru. Addressing the gathering, he mentioned that he only became aware of most societal injustices after becoming the Lokayukta of Karnataka. He added that many individuals today possess an urgent desire to become wealthy instantly, which leads them down the wrong path of illegal money-making. He further emphasized the necessity to foster an atmosphere of peace and harmony in society. Justice Hegde stressed that the responsibility of walking an honest and righteous path lies with the students, as they are the future of the nation. He also highlighted that greed is the most significant malady in today’s society, and there is no remedy for such greed. He asserted that societal change is possible only when individuals overcome the mindset of “wanting to become rich at any cost.” He stated that human life finds fulfilment in embracing humanity and living without deceit. He reflected on his lifelong commitment to honesty, which brought him satisfaction.

Justice Hegde noted that he has already visited 1740 schools across the country and is familiar with their conditions. During the question and answer session, he expressed contentment that legal action was taken against corruption during his tenure without hesitation.

Ramesh K, the chief advisor of the institution, provided insights into the institution’s journey. Dr. K.C. Naik, the institution’s administrator, Dr. Muralidhar Naik, the institution’s Trustee, Venkatesh Murthy, Principal of Shakti PU College, and Ravi Shankar Hegde, Principal of Shakti Residential School, were present.

Sanjith Naik, Secretary of Shakthi Education Trust, extended a warm welcome to the gathering. Sushil Kumar Rathi, Physics Lecturer, delivered the vote of thanks, while Chaitra Bhandari, Biology Lecturer, compered the session.

ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾ. ಎನ್.ಸಂತೋಷ ಹೆಗ್ಡೆಯಿಂದ ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದ

ಆಗಸ್ಟ್ 28 : ಶಕ್ತಿ ನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕರ್ನಾಟಕ ಲೋಕಾಯುಕ್ತದ ನಿವೃತ ನ್ಯಾ. ಎನ್.ಸಂತೋಷ ಹೆಗ್ಡೆ ಇಂದು ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಿದರು. ನನಗೆ ಸಮಾಜದಲ್ಲಿ ಆಗುತ್ತಿರುವ ಹೆಚ್ಚಿನ ಅನ್ಯಾಯ ಗೋತ್ತಾಗಿದ್ದು ಕರ್ನಾಟಕ ಲೋಕಾಯುಕ್ತ ನ್ಯಾಯಧೀಶನಾದ ನಂತರವೇ. ಇವತ್ತು ಸಮಾಜದಲ್ಲಿ ಅನೇಕರ ಭಾವನೆಗಳು ಇರುವುದು ನಾನು ತಕ್ಷಣಕ್ಕೆ ಶ್ರೀಮಂತನಾಗಬೇಕು. ಅದಕ್ಕೆ ಅನೇಕರು ಕಾನೂನು ಬಾಹಿರವಾಗಿ ತಪ್ಪು ದಾರಿಯನ್ನು ಹಿಡಿದು ಹಣ ಮಾಡುವುದು ಇದಕ್ಕೆ ನಿದರ್ಶನವಾಗಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಬೇಕು. ಇಂತಹ ಕೆಲಸ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ಇವತ್ತು ಸಮಾಜಕ್ಕೆ ದೊಡ್ಡ ರೋಗ ಎಂದರೆ ಅದು ದುರಾಶೆ. ಇಂತಹ ದುರಾಶೆಗೆ ಯಾವುದೇ ಮದ್ದಿಲ್ಲ. ಇನ್ನೊಬ್ಬರಿಗೆ ತೊಂದರೆ ಕೊಟ್ಟಾದರು ನಾನು ಶ್ರೀಮಂತನಾಗಬೇಕೆಂಬ ಯೋಚನೆಯಿಂದ ಮನುಷ್ಯ ಹೊರಬಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು. ಅವರು ತಮ್ಮ ಬಾಲ್ಯದ ಜೀವನದಲ್ಲಿ ಶಾಲೆಯಲ್ಲಿ ಓದುತ್ತಿರುವಾಗ ಅಲ್ಲಿ ನೀತಿ ಪಾಠ ಹಾಗೂ ಮೌಲ್ಯಗಳ ಕುರಿತಂತೆ ಶಾಲೆಯಲ್ಲಿ ಅಧ್ಯಾಪಕರು ಪಾಠಮಾಡುತ್ತಿದ್ದುದ್ದನ್ನು ನೆನಪಿಸಿಕೊಂಡರು. ಆದರೆ ಅದು ಇಂದು ಶಾಲೆಗಳಲಿಲ್ಲ. ಇಂದಿನ ದಿನಮಾನಕ್ಕೆ ಹಿರಿಯರು ಕೊಟ್ಟಿರುವ ಮೌಲ್ಯಗಳ ಪಾಠವನ್ನು ನಾವು ಶಾಲೆಯಲ್ಲಿ ಅಳವಡಿಸಿದಾಗ ಮಾತ್ರ ಸಮಾಜದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದೆಂದು ಹೇಳಿದರು.

ಹುಟ್ಟುವಾಗಲೇ ಮಾನವೀಯತೆಯನ್ನು ಕಲಿತು ಸಾಯುವಾಗಲು ಮಾನವನಾಗಿ ಸತ್ತಾಗ ಮಾನವ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು. ನಾವು ಬೇರೆಯವರಿಗೆ ಮೋಸ, ವಂಚನೆ ಮಾಡದಿದ್ದಾಗ ನಮ್ಮ ಜೀವನವು ಸಂತೋಷದಿಂದ ಸಾಗುತ್ತದೆ. ನಾನು ಜೀವನದುದ್ದಕ್ಕೂ ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಿದ್ದೇನೆ. ಇದು ನನಗೆ ತೃಪ್ತಿಯನ್ನು ಕೊಟ್ಟಿದೆ. ಈಗಾಗಲೇ ನಾನು 1740 ಶಾಲೆಗಳಿಗೆ ದೇಶದ್ಯಾಂತ ಭೇಟಿ ಕೊಟ್ಟಿದ್ದೇನೆ. ಅಲ್ಲಿಯ ಸ್ಥಿತಿಗತಿಗಳ ಕುರಿತಂತೆ ನನಗೆ ಅರಿವು ಇದೆ. ಭ್ರಷ್ಟಾಚಾರದಲ್ಲಿ ತೊಡಗಿರುವರನ್ನು ನನ್ನ ಅವಧಿಯಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡಿರುವ ಬಗ್ಗೆ ನನಗೆ ತೃಪ್ತಿಯಿದೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದರು.

ಪ್ರಾರಂಭದಲ್ಲಿ ಸಂಸ್ಥೆಯು ನಡೆದುಕೊಂಡು ಬಂದ ದಾರಿಯ ಬಗ್ಗೆ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ.ನಾಕ್, ಸಂಸ್ಥೆಯ ಟ್ರಸ್ಟಿ ಡಾ.ಮುರಳಿಧರ್ ನಾೖಕ್‌, ಶಕ್ತಿ ಪ.ಪೂ.ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಮತ್ತು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌, ವಂದನಾರ್ಪಣೆಯನ್ನು ಸುಶಿಲ್ ಕುಮಾರ್ ರಾಥಿ ಮತ್ತು ಅದ್ಯಾಪಕಿ ಚೈತ್ರಾ ಭಂಡಾರಿ ನಿರೂಪಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery