Call Us :
+91 96860 00046
+91 9108043552
info@shakthi.edu.in

Let’s Vow to Protect the Country with the Bond of Rakshabandhan- Sri Nandish

Rakshabandhan program was celebrated today at Shakti Residential School and PU College Shakthinagar. The program was inaugurated by the teachers of the school by tying the bond of protection, a symbol of love and affection to the dignitaries present on the stage. Students, teachers and non-teaching staff celebrated the program by tying rakhis to each other. The chief guest of the program, Mr. Nandish, campaigner of Rashtriya Swayamsevak Sangh, addressing the gathering said that Rakshabandhan has a special significance since our ancient times. In Indian history, there is a reference to the incident of Alexander’s wife saving her husband’s life by tying a shield to Raja Pururava who defeated Alexander. He said that protection of environment, society and the country is the basic purpose of this Rakshabandhan. On the same day, Clubs of various departments were inaugurated in the school. He said that these clubs are for the benefit of the society and for the all-round development of the students.

The founder of the organization Dr K.C. Naik presided over the program. He motivated the children to cultivate good manners. He said that they should strive to become good citizens of the country and society. Many student clubs related to science, mathematics, environment, health, literature and information and technology were inaugurated on this occasion. Mr. Ramesh K, Chief-Advisor of Shakthi Education Trust, Shakthi PU College Principal Mr. Venkateshamurthy and the Principal of Shakthi Residential School Mr. Ravi Shankar Hegde were present. Kannada teacher Mr. Sharanappa compered the programme.

ರಕ್ಷೆಯ ಜೊತೆಗೆ ದೇಶದ ರಕ್ಷಣೆಯ ಸಂಕಲ್ಪ ಮಾಡೋಣ – ಶ್ರೀ ನಂದೀಶ್

ಮಂಗಳೂರು 30 : ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಇಂದು ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಶಾಲೆಯ ಶಿಕ್ಷಕಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ರಕ್ಷೆ ಕಟ್ಟುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂಧಿಗಳು ಪರಸ್ಪರ ರಾಖೀ ಕಟ್ಟುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಷ್ಟೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ ಪ್ರಚಾರಕರಾದ ಶ್ರೀ ನಂದೀಶ್ ಅವರು ಮಾತನಾಡಿ ನಮ್ಮ ಪುರಾಣ ಕಾಲದಿಂದಲೂ ರಕ್ಷಾಬಂಧನಕ್ಕೆ ವಿಶಿ?ವಾದ ಮಹತ್ವವಿದೆ. ಭಾರತದ ಇತಿಹಾಸದಲ್ಲಿಯೂ ಅಲೆಕ್ಸಾಂಡರ್‌ನನ್ನು ಸೋಲಿಸಿದ ರಾಜಾ ಪುರೂರವನಿಗೆ ಅಲೆಕ್ಸಾಂಡರ್‌ನ ಪತ್ನಿ ರಕ್ಷೆಯನ್ನು ಕಟ್ಟಿ ತನ್ನ ಪತಿಯ ಜೀವವನ್ನು ಉಳಿಸಿಕೊಂಡ ಘಟನೆ ಉಲ್ಲೇಖವಾಗಿದೆ. ಪರಿಸರ, ಸಮಾಜ, ಹಾಗೂ ದೇಶದ ರಕ್ಷಣೆ ಈ ರಕ್ಷಾಬಂಧನದ ಮೂಲ ಉದ್ದೇಶವಾಗಿದೆ ಎಂದು ನುಡಿದರು. ಇದೇ ದಿನ ಶಾಲೆಯಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಲಾಗಿದೆ. ಈ ಸಂಘಗಳು ಸಮಾಜದ ಹಿತಕ್ಕಾಗಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾೖಕ್‌ ಮಕ್ಕಳು ಉತ್ತಮವಾದ ಸಂಸ್ಕಾರವನ್ನು ಬೆಳಿಸಿಕೊಳ್ಳಬೇಕು. ದೇಶಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ, ಗಣಿತ, ಪರಿಸರ, ಆರೋಗ್ಯ, ಸಾಹಿತ್ಯ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಲಾಯಿತು. ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಶರಣಪ್ಪ ನಿರೂಪಿಸಿದರು.

 

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery