ಮಂಗಳೂರು : 2024 ನೇ ಸಾಲಿನ ಜೆ.ಇ.ಇ.ಮೈನ್ಸ್ (JEE Mains) ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ, ಮಂಗಳೂರು ಇದರ ೬ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಗೆ ಅರ್ಹತೆಯನ್ನು ಪಡೆದಿರುತ್ತಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಿದ ರಾಷ್ಟ್ರೀಯ ಮಟ್ಟದ ಜೆಇಇ ಮೈನ್ಸ್ ಬಿ.ಇ ಮತ್ತು ಬಿ.ಟೆಕ್ ಪ್ರವೇಶಾತಿ ಪರೀಕ್ಷೆಯಲ್ಲಿ ಶಕ್ತಿ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ ಕಲಿಯುವ ರೋಹಿತ್ ಕಲ್ಲುರಾಯ (General) ಶೇಕಡಾ 99.8233726% ಅಂಕಗಳಿಸಿದ್ದು 2923 All India Rank (AIR) ಬಂದಿರುತ್ತದೆ.
ಕ್ರಮವಾಗಿ ಪ್ರತೀಕ್ಷಾ ಬಿ.ಪಿ. (General) -96.3043966%, ಎನ್ ಹಿತೇಶ್ ಕುಮಾರ್ (OBC) – 93.6075535%, ವೈಭವ್ ಡಿ.ಜೆ. (OBC)- 87.6050735%, ವಿಶ್ವಜೀತ್ (OBC) – 83.2164139% ಕಾವ್ಯ ಡಿ ಮಾರ್ಲ (OBC) – 83.1852895% ಗಳಿಸುವುದರ ಮೂಲಕ ಜೆಇಇ ಅಡ್ವಾನ್ಸ್ಗೆ ಅರ್ಹತೆಯನ್ನು ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರು ಮತ್ತು ಆಡಳಿತಾಧಿಕಾರಿಗಳಾದ ಡಾ.ಕೆ.ಸಿ.ನಾೖಕ್ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಅಭಿನಂದಿಸಿದರು. ಅತೀ ಕಡಿಮೆ ವರ್ಷದಲ್ಲಿ ಅತೀ ಹೆಚ್ಚು ಸಾಧನೆ ಮಾಡಲು ಶ್ರಮಿಸಿದ ಸಂಸ್ಥೆಯ ಉಪನ್ಯಾಸಕ ಮತ್ತು ಇತರ ಸಿಬ್ಬಂದಿ ವರ್ಗಕ್ಕೆ ಶುಭಹಾರೈಸಿದರು.
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳು ದೇಶದ ರಾಷ್ಟ್ರಮಟ್ಟದ ವಿದ್ಯಾಸಂಸ್ಥೆಯಲ್ಲಿ ಓದಬೇಕು ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಸಂಜಿತ್ ನಾೖಕ್ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಲು ಪೂರಕವಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹೆಚ್ಚಿನ ತಯಾರಿ ನಡೆಸಲು ಒಂದು ವರ್ಷದ ನೀಟ್ ಲಾಂಗ್ಟರ್ಮ್ (NEET Long Term) ತರಬೇತಿ ಅಗತ್ಯವಿದ್ದು, ಶಕ್ತಿ ಅಡ್ವಾನ್ಸ್ಡ್ ಲರ್ನಿಂಗ್ ಅಕಾಡೆಮಿ (Shakthi Advanced Learning Academy) ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರ ಮೂಲಕ ಹೆಚ್ಚಿನ ತರಬೇತಿ ನೀಡಲಾಗುವುದು.
ಈ ಸಂದರ್ಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೆಂಕಟೇಶ್ ಮೂರ್ತಿ ಎಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತ ಸೂರಜ್, ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.