Call Us :
+91 96860 00046
+91 9108043552
info@shakthi.edu.in

ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದ ಪಪೂ ಪರೀಕ್ಷೆಯಲ್ಲಿ 4 ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಶಕ್ತಿ ಪಪೂ ಕಾಲೇಜಿನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿ 99.17ಅಂಕ ಪಡೆದು ಸಾಧನೆ ಮಾಡಿರುವ ರಿಚಾ ಗಣೇಶ್ ದಾಲ್ವಿಯವರು ಆನ್‌ಲೈನ್ ಮೂಲಕ ಭಾಗವಹಿಸಿ ಶಕ್ತಿ ಪಪೂ ಕಾಲೇಜಿನ ಶಿಕ್ಷಕ ವೃಂದದ ಶ್ರಮವನ್ನು ಶ್ಲಾಘಿಸಿದರು. 98.66 ಅಂಕ ಪಡೆದಿರುವ ನೈದಿಲೆಯವರನ್ನು, 98.50% ಪಡೆದಿರುವ ವಿಜ್ಞಾನ ವಿಭಾಗದ ಸ್ಟೀವ್ ಜೆಪ್ ಲೋಬೋ, 98.33% ಅಶ್ವಥ್ ಅಜಿತ್ ಪೈ ಅವರನ್ನು ಸಾಲು ಹೋದಿಸಿ, ನೆನಪಿನ ಕಾಣಿಕೆ ನೀಡಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾಕ್ ಸನ್ಮಾನಿಸಿದರು.

ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ಶಕ್ತಿ ಪಪೂ ಕಾಲೇಜು ಕಳೆದ 6 ವರ್ಷಗಳಲ್ಲಿ ಮೂರು ವರ್ಷಗಳ ಕಾಲ ನಿರಂತರ ರಾಜ್ಯಮಟ್ಟದಲ್ಲಿ ರ್‍ಯಾಂಕ್‌ನ್ನು ಗಳಿಸುತ್ತಾ ಬರುತ್ತಿದೆ. ಶಕ್ತಿ ಪಪೂ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉತ್ತಮವಾದ ಅಂಕವನ್ನು ಪಡೆಯುವಂತಾಗಲು ತುಂಬಾ ಶ್ರಮ ಪಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಉತ್ತಮ ಅಂಕ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದರು.

ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ.ಸಿ. ನಾೖಕ್‌ ಮಾತನಾಡಿ ಶಕ್ತಿ ಪಪೂ ಕಾಲೇಜಿನ 4 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್‍ಯಾಂಕ್ ಪಡೆದು ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾದ ಸಾಧನೆಯಾಗಿದೆ. ನಾನು ಸಂಸ್ಥೆ ಪ್ರಾರಂಭ ಮಾಡುವಾಗ ಈ ತರದ ಕನಸು ಕಂಡಿದೆ. ಇದು ಈ ಸಂದರ್ಭದಲ್ಲಿ ಸಾಕಾರವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸ್ಪರ್ದಾತ್ಮಕ ಪರೀಕ್ಷೆಯಲ್ಲಿಯು ಈ ತರದ ರ್‍ಯಾಂಕ್‌ನ ನಿರೀಕ್ಷೆ ಮಾಡುತ್ತಿದ್ದೇನೆ. ಇದು ಸಾಕಾರವಾಗುವ ದಿನಗಳು ಹತ್ತಿರದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿಹಂಚಿ ಖುಷಿಯನ್ನು ವ್ಯಕ್ತ ಪಡಿಸಿದರು.

ವೇದಿಕೆಯಲ್ಲಿ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Announcements

10th Model Question Paper Download
Date : Monday, January 13th, 2020
Admissions open for College
Date : Thursday, January 3rd, 2019

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery